ನಮಗೆಲ್ಲ ವಾಮನ ತ್ರಿವಿಕ್ರಮನಾದ ಕಥೆಗೊತ್ತಿದೆ. ಇದೊಂದು ಪ್ರಸಿಧ್ದ ಜನಪ್ರಿಯ ಪೌರಾಣಿಕ ಕಥೆ. ಬಲಿಚಕ್ರವರ್ತಿಯ ಸಮೀಪ ಮಹಾವಿಷ್ಣುವು ವಾಮನನಾಗಿ ಬಂದು ಮೂರು ಹೆಜ್ಜೆ ಇಡುವಷ್ಟು ಜಾಗವನ್ನು ದಾನವನ್ನಾಗಿ ಬೇಡಿ ಮೂರುಲೋಕವನ್ನು ಅಳೆದ. ಇದರ ಹಿಂದೆ ಮಹಾವಿಷ್ಣುವಿನ ಸಂಕಲ್ಪವಿತ್ತು, ದೇವತೆಗಳ ಹಂಬಲವಿತ್ತು. ಎಲ್ಲಕ್ಕೂ ಮಿಗಿಲಾಗಿ ಲೊಕಹಿತ, ವ್ಯವಸ್ಥೆ ಹಾಗೂ ಸಮಸ್ಯೆಯ ಒಳಿತು ಬಯಸುವ ಹಂಬಲವಿತ್ತು. ಸಾಮಾನ್ಯ ವಟುವಾಗಿ ಬಂದ ವಾಮನನ ಮನದಲ್ಲಿ ಅದಮ್ಯ ಕರ್ತವ್ಯ ಪ್ರಜ್ಙೆಇತ್ತು.









