ಕನ್ನಡ
ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರಿನ ಭರವಸೆಯ ಯುವ ನಾಯಕ. ಶ್ರೀಯುತರು ತಮ್ಮ ೧೮ನೇ ವಯಸ್ಸಿನಲ್ಲಿ ರಾ.ಸ್ವ.ಸಂಘದಲ್ಲಿ ಪ್ರಚಾರಕರಾಗಿ ಸಾಮಾಜಿಕ ಜೀವನವನ್ನು ಆರಂಭಿಸಿದರು. ತನ್ನ ತಂದೆಯ ಮರಣಾನಂತರ ಮನೆಯ ಜವಾಬ್ದಾರಿಯನ್ನು ಹೊತ್ತು ಕೃಷಿಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮುಂದೆ ಕುಟುಂಬದ ಅಗತ್ಯತೆಗಾಗಿ ಕಂಟ್ರಾಕ್ಟರ್ ಆಗಿ ತನ್ನ ವೃತ್ತಿಯನ್ನು ಮುಂದುವರಿಸಿದರು. ಉತ್ತಮ ವಾಕ್ಚಾತುರ್ಯ ಹಾಗೂ ಸಂಘಟನಾ ಕೌಶಲ್ಯದಿಂದಾಗಿ ರಾಜಕೀಯ ರಂಗದಲ್ಲಿ ತನ್ನನ್ನು ತೊಡಗಿಸಿಕೊಳ್ಳುವಂತೆ ಮಾಡಿದ್ದಲ್ಲದೇ, ಭಾ.ಜ.ಪದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಪಾಲ್ಗೊಂಡರು. ಹಾಗೂ ಅನೇಕ ಚುನಾವಣಾ ಸಂದರ್ಭದಲ್ಲಿ ಪಕ್ಷದ ಸಂಘಟನಾವಲಯದಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡಿದ್ದರು.
ಶ್ರೀಯುತರು ಕಟೀಲು ಶ್ರೀಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ತಮ್ಮ ಅಸಾಧಾರಣ ಸಂಘಟನಾ ಚಾತುರ್ಯ, ಹಾಗೂ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದ ಅಲ್ಪಾವಧಿಯ ಯಶಸ್ವಿ ಸೇವೆಯನ್ನು ರಾಜ್ಯದಾದ್ಯಂತ ಮಾತ್ರವಲ್ಲದೇ, ಮಹಾರಾಷ್ಟ್ರ, ಗುಜರಾತ್, ಗಲ್ಫ್ ದೇಶಗಳ ಅನೇಕ ಭಕ್ತಾದಿಗಳ ವಿಶೇಷ ಗಮನಕ್ಕೆ ಪಾತ್ರರಾಗಿದ್ದಾರೆ.
ಈ ಸಾಧನೆಯನ್ನು ಗಮನಿಸಿದ ಪರಿಸರವು ಅವರನ್ನು ಪಾವಂಜೆ ಸೌತ್ರಾಮಣಿ ಗವಾಮಯನ ಯಾಗ ಸಮಿತಿಯ ಅಧ್ಯಕ್ಷರನ್ನಾಗಿಸಿತು. ಸಮಾಜದ ಎಲ್ಲಾ ವರ್ಗದ ಜನರಿಗೆ ಸಮಾನ ಸ್ಥಾನಮಾನ ಸಿಗುವಲ್ಲಿ ಶ್ರೀಯುತರ ಹೋರಾಟದ ಶ್ರಮ ಸಾಕಷ್ಟಿದೆ. ಈ ಯಾಗದಲ್ಲಿ ಎಲ್ಲ ವರ್ಗದ ದಂಪತಿಗಳಿಗೆ ಯಾಗದೀಕ್ಷೆ ಸಿಗಲು ಅನುವು ಮಾಡಲಾಗಿತ್ತು.
ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ವಲಯಗಳನ್ನು ಎತ್ತಿ ಹಿಡಿಯಲು ಕೆಲಸ ಮಾಡುವ ‘ಮಾತೃ ಭೂಮಿ ಸಮಾಜ’ದ ಸ್ಥಾಪಕಾಧ್ಯಕ್ಷರು. ಅತ್ಯಂತ ಬಡವ ಹಾಗೂ ಹಿಂದುಳಿದ ಸಮಾಜವನ್ನು ಶ್ರೀಯುತರು ಪ್ರಸ್ತುತ ಸಂಘದ ಮೂಲಕ ತಲುಪಿದ್ದಾರೆ.
ಕ್ಷೇತ್ರ: ಮಂಗಳೂರು
ವಿಳಾಸ:ಜಿಲ್ಲಾ ಬಿ.ಜೆ.ಪಿ ಕಛೇರಿ
ಜಗನ್ನಾಥ್ ರಾವ್ ಜೋಷಿ ಸೌಧ ,
ಕೊಡಿಯಾಲಬೈಲು ಮಂಗಳೂರು
ದೂರವಾಣಿ : 94485-49445 / 0824-2444319
ಜನನ : ೦೭.೧೨.೧೯೬೬
ತಂದೆ : ದಿ|| ನಿರಂಜನ ಶೆಟ್ಟಿ ನೆಡ್ಯೋಡಿಗುತ್ತು, ಕಟೀಲು
ತಾಯಿ : ಎನ್. ಸುಶೀಲವತಿ ಶೆಟ್ಟಿ
ಹುಟ್ಟೂರು : ಕುಂಜಾಡಿ ಗ್ರಾಮ, ಪಾಲ್ತಾಡಿ
ಸುಳ್ಯ ವಿಧಾನಸಭಾ ಕ್ಷೇತ್ರ ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
ವಿದ್ಯಾಭ್ಯಾಸ : ಸುಳ್ಯ ತಾಲ್ಲೂಕಿನ ಪೆರುವಾಜೆ(ಮುಕ್ಕೂರು) ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ವಿಟ್ಲಹಾಗೂ ಪುತ್ತೂರು ಫಿಲೋಮಿನಾದಲ್ಲಿ ಹೈಸ್ಕೂಲು ಶಿಕ್ಷಣ
ವೃತ್ತಿ ಜೀವನ : ತಂದೆಯ ನಿಧನದ ಬಳಿಕ ೧೯೯೧ರಿಂದ ತಂದೆಯ ಮನೆಯಾದ ಕಟೀಲಿನ ಕೊಡೆತ್ತೂರು ನಡ್ಯೋಡಿಗುತ್ತು ಮನೆಯ ಜವಾಬ್ದಾರಿ-ಯೊಂದಿಗೆ ಕಟ್ಟಡ ಗುತ್ತಿಗೆದಾರನಾಗಿ ಸ್ವಂತ ಉದ್ಯೋಗ ಪ್ರಾರಂಭ.
೧೮ನೇ ವರ್ಷದಲ್ಲಿ ಸಂಘದ ಪ್ರಚಾರಕರಾಗಿ ಸಾಮಾಜಿಕ ರಂಗಪ್ರವೇಶ
ರಾ.ಸ್ವ. ಸಂಘದ ತಾಲ್ಲೂಕು ಕಾರ್ಯವಾಹನಾಗಿ ಜವಾಬ್ದಾರಿ
ನಿರ್ವಹಣೆ ಆಯೋಧ್ಯಾ ಆಂದೋಲನದಲ್ಲಿ ಭಾಗಿ ಧರ್ಮಜಾಗರಣದ ವಿಭಾಗ ಜವಾಬ್ದಾರಿ
೨೦೦೪ರಲ್ಲಿ ರಾಜಕೀಯ ರಂಗದ ಜವಬ್ದಾರಿ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನಿಯುಕ್ತಿ ೫ವರ್ಷ ಪಕ್ಷ ಸಂಘಟನೆಯ ಮೂಲಕ ಕಾರ್ಯ ಕರ್ತರೊಂದಿಗೆ ನಿಕಟ ಸಂಪರ್ಕ
ಹೋರಾಟ :
ಆಯೋಧ್ಯಾ ಆಂದೋಲನದಲ್ಲಿ ಜವಾಬ್ದಾರಿ
ಕಡಂದಲೆ ಪರಿಸರ ಉಳಿಸಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು
ಕಿನ್ನಿಗೋಳಿ ರೈತ ಹಿತರಕ್ಷಣಾ ವೇದಿಕೆ ರಚಿಸಿ ರೈತಪರ ಹೋರಾಟ
ಕಟೀಲನ ಪರಿಸರದಲ್ಲಿ ನಾಗರಿಕ ಸಮಿತಿ ರಚಿಸಿ ಪರಿಸರ ರಕ್ಷಣೆ ಮತ್ತು ಮಧ್ಯ ಮಾರಾಟ ನಿಷೇಧಕ್ಕಾಗಿ ಹೋರಾಟ
ಧಾರ್ಮಿಕ ಚಟುವಟಿಕೆಗಳು : ೧೭ನೇ ವರ್ಷದಲ್ಲಿಯೇ ಕುಗ್ರಾಮವಾದ ಪಾಲ್ತಾಡಿ ಮಂಜುನಾಥ ನಗರ ಎಂಬಲ್ಲಿ ಸಿದ್ದಿ ವಿನಾಯಕ ಸೇವಾ ರಚಿಸಿ ಅದರ ಮುಖೇನ ಗಣೇಶೋತ್ಸವ ಪ್ರಾಂರಭ ಆಸಂಸ್ಥೆಯ ಅಡಿಯಲ್ಲಿ ಭಜನಾಮಂದಿರ, ಶಿಕ್ಷಣ ಸಂಸ್ಥೆ, ಸ್ವ-ಸಹಾಯ ಸಂಘ ರಚಿಸಿ ಗ್ರಾಮೋತ್ಥಾನ ಕಾರ್ಯ ವಿಸ್ತರಣೆ
ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಸನ್ನಿಧಿಯಲ್ಲಿ ೨೨ ವರ್ಷಗಳ ಬಳಿಕ ನಡೆದ ಬ್ರಹ್ಮಕಶೋತ್ಸವದ ಸಮಿತಿಯ ಕಾರ್ಯಾಧ್ಯಕ್ಷ ಪಾವಂಜೆ ಸೌತ್ರಾಮಣಿ ಗವಾಮಯನ ಯಾಗ ಸಮಿತಿಯ ಕಾರ್ಯಾಧ್ಯಕ್ಷನಾಗಿ ಜವಾಬ್ದಾರಿ ರಾಜ್ಯದಲ್ಲೇ ಅತಿದೊಡ್ಡ ವಿಶಿಷ್ಟಯಾಗವೆಂಬ ಕೀರ್ತಿ
ಗುರುಪುರ ಪರಿಸರದಲ್ಲಿ ರಾಮ ಜಪಯಾಗ ಹಿಂದು ಸಮಾಜೋತ್ಸವ ಸಂಘಟಿಸಿದ್ದು
ಪ್ರಸ್ತುತ ಜಿಲ್ಲೆಯ ೧೭ ದೇವಸ್ಥಾನ, ಭಜನಾ ಮಂದಿರ, ದೇವಸ್ಥಾನಗಳಲ್ಲಿ ಕಾರ್ಯಾಧ್ಯಕ್ಷ ಜವಾಬ್ದಾರಿ
ಸಾಮಾಜಿಕ ರಂಗ : ಗುರುಪುರ ಕೈಕಂಬದಲ್ಲಿ ಮಿತ್ರರ ಜತೆ ಸೇರಿ ಮಾತೃಭೂಮಿ ಸೊಸೈಟಿ ಸ್ಥಾಪನೆ.
ಬಡವರಿಗೆ ನೆರವಾಗಲು ಉಚಿತ ಅಂಬ್ಯುಲೆನ್ಸ್ ಸೇವೆ.
ಸಂಸ್ಕಾರ ಸೇವೆ ಸುರಕ್ಷೆ ಶಿಕ್ಷಣ ಆರೋಗ್ಯಕ್ಷೇತ್ರದಲ್ಲಿ ನಿರಂತರ ಚಟುವಟಿಕೆ



